RYTHARA SEVA SAHAKARA SANGHA NIYAMITHA
Singanayakanahalli
Testimonials
 
Home >> About Us >> Testimonials
Testimonials

"ನಾನು ಕೂಡ ಈ ಸಂಸ್ಥೆಯ ಸದಸ್ಯನಾಗಿದ್ದು ಕೃಷಿ ಸಾಲ ಪಡೆದಿರುತ್ತೇನೆ. ಈ ಸಂಸ್ಥೆಯು ಸರ್ವತೋಮುಖ ಅಭಿವೃದ್ದಿ ಹೊಂದಿ ಮಾದರಿ ಸಹಕಾರ ಸಂಘವಾಗಿ ರೂಪುಗೊಂಡಿದೆ. ಸಂಘದ ವ್ಯಾಪ್ತಿಯ ಹೆಚ್ಚಿನ ಸದಸ್ಯರು ಸೌಲಭ್ಯಗಳನ್ನು ಪಡೆದು ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಈ ಸಂಸ್ಥೆಯು ಕರ್ನಾಟಕದಲ್ಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಲ್ಲಿ ಮೊದಲನೆಯದಾಗಿರುತ್ತದೆ ಎಂದು ಭಾವಿಸುತ್ತೇನೆ. ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಸಂಘದ ಅಭಿವ್ರದ್ದಿಗೆ ಅಹರ್ನಿಶಿಯಾಗಿ ದುಡಿಯುತಿದ್ದಾರೆ. ಸಂಘ 2010-11 ರ ಸಾಲಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಸಹಕಾರಿ ಅಭಿವೃದ್ದಿ ನಿಗಮದ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ ಅಲ್ಲದೆ ಇನ್ನೂ ಹಲವಾರು ಪ್ರಶಸ್ತಿಗಳು ಲಭ್ಯವಾಗಿದೆ. ಸಂಘವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸದಸ್ಯರಿಗೆ ಸೌಲಭ್ಯಗಳನ್ನು ನೀಡಿ ಗ್ರಾಮೀಣ ಜನರ ಆರ್ಥಿಕ ಮುನ್ನಡೆಗೆ ಸಹಕಾರಿಯಾಗಲಿ."

-ಎಸ್.ಆರ್. ವಿಶ್ವನಾಥ
  ಶಾಸಕರು ಯಲಹಂಕ ವಿಧಾನಸಭಾ ಕ್ಷೇತ್ರ
  ಬೆಂಗಳೂರು.

 

"ಈ ಸಹಕಾರ ಸಂಘದ ಆಡಳಿತ ಮಂಡಳಿಯವರು ಉತ್ತಮವಾಗಿ ಕಾರ್ಯ ನಿರ್ವಹಿಸುತಿದ್ದು ಸಹಕಾರ ಸಂಘಗಳ ಅಗ್ರಗಣ್ಯ ಸಾಲಿನಲ್ಲಿ ಸೇರಿದೆ. ಸಹಕಾರ ಎಲ್ಲಾ ಕ್ಷೇತ್ರಗಳಲ್ಲಿ ಪಸರಿಸಿಕೊಂಡಿದ್ದು ಇತ್ತೀಚೆಗೆ ಜನರಲ್ಲಿ ಸಹಕಾರ ಮೌಲ್ಯ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಸಿಂಗನಾಯಕನಹಳ್ಳಿ ಸಂಘವು ಆಡು ಮುಟ್ಟದ ಸೊಪ್ಪಿಲ್ಲ ಈ ಸಂಘ ಮಾಡದೇ ಇರುವ ಕೆಲಸವೇ ಇಲ್ಲ. ವನಿತಂ, ವಿತ್ತಂ, ಪುಸ್ತಕಂ ಇವು ಇನ್ನೊಬ್ಬರ ಕೈ ಸೇರಿದಾಗ ಇವು ಹಿಂದಿರುಗಿ ಬರುವುದಿಲ್ಲ. ಆದರೆ ಈ ಸಹಕಾರ ಸಂಘವು ಶೇ 90% ಸಾಲ ವಸೂಲು ಮಾಡಿದ್ದು ಪ್ರಶಂಶನೀಯ."

-ರಾಮಚಂದ್ರ ಗೌಡ
  ಮಾಜಿ ಸಚಿವರು
  ವಿಧಾನಪರಿಷತ್ ಸದಸ್ಯರು.

 

"ಕೇರಳ ರಾಜ್ಯದಲ್ಲಿ ರೈತರಿಗೆ ಶೇ. 7% ಬಡ್ಡಿ ದರದಲ್ಲಿ ಸಾಲ ನೀಡುತಿದ್ದು ಈ ರಾಜ್ಯದಲ್ಲಿ ಶೇ. 3% ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುತಿದ್ದು ಕರ್ನಾಟಕ ಸರ್ಕಾರವೂ ಸಹಕಾರ ಚಳುವಳಿಗೆ ಹೆಚ್ಚು ಒತ್ತು ನೀಡಿದೆ. ಇಲ್ಲಿನ ಸಂಘ ಒಂದು ಕೋಟಿಗೂ ಹೆಚ್ಚು ಲಾಭ ಗಳಿಸಿದ್ದು ಸಂಘದ ಆಧ್ಯಕ್ಷಣಿ ಮಹಿಳೆಯಾಗಿ ಬ್ಯಾಂಕನ್ನು ಮುನ್ನೆಡೆಸುತ್ತಿರುವುದು ಪ್ರಶಂಶನೀಯ. ಸ್ತ್ರೀಶಕ್ತಿ ಗುಂಪುಗಳಿಗೆ ಶೇ 4% ಬಡ್ಡಿ ದರದಲ್ಲಿ ಈ ಸಂಘ 400 ಕ್ಕೂ ಹೆಚ್ಚು ಗುಂಪುಗಳಿಗೆ ಸಾಲ ನೀಡಿರುವುದು ಜೊತೆಗೆ ಕಂಪ್ಯೂಟರ ತರಬೇತಿ, ಮಹಿಳೆಯರಿಗೆ ಎಂಬ್ರಾಯಿಡರಿ ತರಬೇತಿ, ಹೊಲಿಗೆ ತರಬೇತಿ, ಆರೋಗ್ಯ ಶಿಬಿರಗಳನ್ನು ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು."

-ಜಿ. ಸುಧಾಕರನ್
  ಸಹಕಾರ ಸಚಿವ
  ಕೇರಳ ಸರ್ಕಾರ.

 

"ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಅಭಿವೃದ್ದಿಯನ್ನು ಕಾಣಬೇಕಾದರೆ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಈ ಸಹಕಾರ ಸಂಘವು ಕೃಷಿ, ಕೃಷಿಯೇತರ, ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಆರ್ಥಿಕ ನೆರವನ್ನು ನೀಡಿದ್ದು ಈ ಸಂಘದ ಲಾಭ ಕೋಟಿಗೂ ಮೀರಿದೆ. ಮಹಿಳಾ ಸದಸ್ಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಸೌಲಭ್ಯ ಪಡೆದಿದ್ದು ಮಹಿಳೆಯೊಬ್ಬರು ಸಂಘದ ಅಧ್ಯಕ್ಷರಾಗಿ ಮುನ್ನೆಡೆಸುತ್ತಿರುವುದು ವಿಶೇಷ ಸಂಗತಿಯಾಗಿದೆ."

-ಲಕ್ಷಣ ಸಂಗಪ್ಪ ಸವದಿ
  ಮಾಜಿ ಸಹಕಾರ ಸಚಿವರು.

 

"ಈ ಸಹಕಾರ ಸಂಘವು ಒಂದು ವಾಣಿಜ್ಯ ಬ್ಯಾಂಕಿಗೆ ಕಡಿಮೆಯಿಲ್ಲದಷ್ಟು ವ್ಯವಹಾರವನ್ನು ನಡೆಸುತಿದ್ದು ಸಂಘವೂ ತನ್ನ ಸ್ವಂತ ಬಂಡವಾಳದಿಂದಲೇ ಸಂಘದ ಸದಸ್ಯರಿಗೆ ಗರಿಷ್ಟ ರೂ. 10 ಲಕ್ಷ ಕೃಷಿ ಹಾಗೂ ಕ್ರಷಿಯೇತರ ಸಾಲ ನೀಡುತ್ತಿರುವುದು ಹೆಮ್ಮೆಯ ವಿಚಾರ. ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಸಾಲ ಸೌಲಭ್ಯಗಳು ದೊರಕದೇ ರೈತರು ಲೆವಾದೇವಿದಾರರ ಹಿಡಿತಕ್ಕೆ ಸಿಲುಕಿ ನಲಗುತಿದ್ದಾರೆ. ಈ ಸಂಘ ಇದಕ್ಕೆ ವ್ಯತಿರಿಕ್ತವಾಗಿದ್ದು ಸಂಘದ ಸದಸ್ಯರಿಗೆ ಆರೋಗ್ಯ ಶಿಬಿರಗಳನ್ನು ನಡೆಸಿ ಯಶಸ್ವಿನಿ ವಿಮೆ ಕಂತನ್ನು ಸಂಘವೇ ಭರಿಸುತ್ತಿರುವುದು ಸಂಘದ ಸಾಮಾಜಿಕ ಚಿಂತನೆಗೆ ಸಾಕ್ಷಿಯಾಗಿದೆ."

-ಜಿ.ಟಿ. ದೇವೇಗೌಡ
  ಮಾಜಿ ಸಹಕಾರ ಸಚಿವರು.

 
"Rythara Seva Sahakara Sangha Bank, A Bank under Society act is situated at Singanayakanahalli, mainly catering to the needs of the poor farmers and also into agricultural sector.The society has been steadily growing from the gross root level since the inception in 1977,under the guidance and sponsorship of Syndicate Bank a Government of India Undertaking.The society has various branches in and around Bangalore and renders services on par with the Nationalised Banks, such as funding against Gold ornaments at lower rates extending locker facilities to all its customers and many more attractive schemes."
-Smt.Sheela Manjunath
  Branch Manager, Yelahanka Branch
  Syndicate Bank.
 
 
 
 
 
 
Copyright©2013 Privacy Policy Disclaimer Sitemap