RYTHARA SEVA SAHAKARA SANGHA NIYAMITHA
Singanayakanahalli
Testimonials
 
Home >> About Us >> Success Stories
Success Stories
‘’ಕರ್ನಾಟಕ ಸಹಕಾರಿ ಕೃಷಿ ಪತ್ತಿನ ವ್ಯವಸ್ಥೆಯ ಅಧ್ವೈತ ಮುಕುಟಮಣಿಯಾಗಿ ರೈತರ ಸೇವಾ ಸಹಕಾರ ಸಂಘ (ನಿ). ಸಿಂಗನಾಯಕನಹಳ್ಳಿ ‘’
  
ಬಂಡವಾಳಶಾಹಿ ವ್ಯವಸ್ಥೆ ಹಾಗೂ ಸಮಾಜವಾದದ ನಡುವಿನ ಕೊಂಡಿಯಾಗಿ ಅಂದಿನ ಕೈಗಾರಿಕಾ ಕ್ರಾಂತಿಯ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದ ಸಹಕಾರ ಚಳುವಳಿ ಭಾರತದಲ್ಲಿ ಶತಮಾನ ಮೀರಿ ಹಾಗೂ ದಶಕಗಳಲ್ಲಿ ಅಡಿಯಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಸಹಕಾರಿ ಕೃಷಿ ಪತ್ತಿನ ವ್ಯವಸ್ಥೆಯಲ್ಲಿ ಅದ್ವಿತೀಯ ಮುಕುಟಮಣಿಯಾಗಿ ಹೊರಹೊಮ್ಮಿರುವುದು ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘ (ನಿ).
 
ಶರವೇಗದಲ್ಲಿ ನಡೆಯುತ್ತಿರುವ ನಗರೀಕರಣದ ಹೊಡೆತದ ಹಿನ್ನೆಲೆಯಿದ್ದರೂ ಸಹ ಹೊಸ-ಹೊಸ ಯೋಜನೆಗಳ ಅವಿಷ್ಕಾರ ಮತ್ತು ಅನುಷ್ಟಾನದೊಂದಿಗೆ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡು ಕಾರ್ಯವ್ಯಾಪ್ತಿಯ 48 ಹಳ್ಳಿಗಳಿಗೂ ತನ್ನ ನಿಸ್ಪ್ರುಹ ಸೇವೆಯನ್ನು ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸರ್ಕಾರದ ಮಹೋನ್ನತ ಯೋಜನೆಗಳಾದ ಶೂನ್ಯ ಬಡ್ಡಿದರದಲ್ಲಿ ಸಾಲ, ಸ್ವಸಹಾಯ ಗುಂಪುಗಳಿಗೆ ಸಾಲ ಅಷ್ಟೇ ಅಲ್ಲದೇ ಗರಿಷ್ಟ ಸಂಖ್ಯೆಯಲ್ಲಿ ಸ್ವಸಹಾಯ ಸಂಘಗಳ ರಚನೆ ಹಾಗೂ ಗುಂಪು ಜೋಡಣೆಯ ಕೀರ್ತಿ ಈ ಸಂಘಕ್ಕೆ ಸಲ್ಲುತ್ತದೆ. ಸಂಘದ ಎಲ್ಲಾ ಸದಸ್ಯರಿಗೆ ಸಂಘದ ವತಿಯಿಂದಲೇ ಯಶಸ್ವಿನಿ ಯೋಜನೆಯ ವಂತಿಗೆಯನ್ನು ಪಾವತಿಸುತ್ತಿರುವ ಏಕಮೇವ ಸಂಸ್ಥೆ ಇದಾಗಿದೆ.
 
ನಿರಂತರವಾಗಿ ತನ್ನ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ, ಜಾನುವಾರು ಆರೋಗ್ಯ ತಪಾಸಣೆ ಶಿಬಿರ, ಕೃಷಿ ಪ್ರಾತ್ಯಕ್ಷತೆ ಅಷ್ಟೇ ಅಲ್ಲದೇ ಇದೀಗ ತನ್ನ ಸದಸ್ಯರ ಅನುಕೂಲಕ್ಕಾಗಿ ಮಾರಸಂದ್ರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೂ ಕೈ ಹಾಕಿರುವುದು ಶ್ಲಾಘನೀಯ.
 
ಸಹಕಾರ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಶಸ್ತಿಯಾದ “ಸಹಕಾರ ರತ್ನ” ಪ್ರಶಸ್ತಿ ಅಧ್ಯಕ್ಷರು ಮುಡಿಗೇರಿಸಿದ್ದು ಹಾಗೂ ಅಖಿಲ ಭಾರತ ಮಟ್ಟದ ಎನ್.ಸಿ.ಡಿ.ಸಿ ಮುಖೇನ “ಅತ್ಯುತ್ತಮ ಸಹಕಾರ ಸಂಘ” ಪ್ರಶಸ್ತಿ ಅಲ್ಲದೇ ಇನ್ನೂ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವುದು ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗದ ಸೇವಾ ತತ್ಪರತೆಗೆ ಸಾಕ್ಷಿಯಾಗಿದೆ.
 
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಹಾಗೂ ಸೇವೆ ನೀಡುವ ದಿಕ್ಕಿನಲ್ಲಿ ಈ ಸಂಘವು ಕಾರ್ಯೋನ್ಮುಖವಾಗಲಿ ಎಂದು ಆಶಿಸುತ್ತೇನೆ.
 
ವಂದನೆಗಳೊಂದಿಗೆ
-ಎಂ.ಡಿ.ನರಸಿಂಹಮೂರ್ತಿ
  ಸಹಕಾರ ಸಂಘಗಳ ಉಪನಿಬಂಧಕರು,
  ಬೆಂಗಳೂರು.
   
ನಾನು ಕಳೆದ 35 ವರ್ಷಗಳಿಂದ ಈ ಸಂಘದ ಸದಸ್ಯನಾಗಿರುತ್ತೇನೆ. ನಾನು ಈ ಸಂಘದಿಂದಆರ್ಥಿಕ ನೆರವನ್ನು ಪಡೆದುಕೃಷಿಯಲ್ಲಿ ತೊಡಗಿಸಿಕೊಂಡಿರುತ್ತೇನೆ. ಈ ಪ್ರದೇಶದಲ್ಲಿತೋಟಗಾರಿಕೆ ಬೆಳೆ ಹಾಗೂ ವಿಶೇಷ ತಳಿ ಮಾವು ಹಾಗೂ ದ್ರಾಕ್ಷಿಅಭಿವೃದ್ದಿ ಪಡಿಸಿ ಯೌವುದೇ ನೌಕರಿಯನ್ನು ಅವಲಂಬಿಸದೆ ಸ್ವಾವಲಂಬಿ ಜೀವನ ನಡೆಸುತಿದ್ದೇನೆ. ನನ್ನ ಮಕ್ಕಳು ಒಬ್ಬರು ವೈದ್ಯರಾಗಿದ್ದುಇನ್ನೊಬ್ಬ ಮಗ ಬಿ.ಎ. ಎಲ್.ಎಲ್.ಬಿ ಮಾಡಿಕೃಷಿಯನ್ನೇತನ್ನ ವೃತ್ತಿ ಮಾಡಿಕೊಂಡಿದ್ದಾನೆ. ಈ ಸಂಘದಲ್ಲಿ ನಾನು ಕೂಡ 7 ವರ್ಷಗಳ ಕಾಲ ಅಧ್ಯಕ್ಷನಾಗಿದುಡಿದಿದ್ದು ಈ ಸಂಘದಅಭಿವ್ರದ್ದಿಗೆ ಸಹಕಾರಿಯಾಗಿರುತ್ತೇನೆ. ಮಾನ್ಯ ಮುಖ್ಯ ಮಂತ್ರಿಗಳಾಗಿದ್ದ ಬಂಗಾರಪ್ಪನವರ ಸರ್ಕಾರದಲ್ಲಿಕೃಷಿಯಲ್ಲಿರಾಜ್ಯ ಪ್ರಶಸ್ತಿ ಪಡದಿರುತ್ತೇನೆ. ಈ ಪ್ರಶಸ್ತಿಗೆ ನಾನು ಅರ್ಹನಾಗಲು ಈ ಸಂಘದಿಂದದೊರೆತ ಸಹಕಾರವೇ ಮುಖ್ಯಕಾರಣ. ಮಾಜಿ ಉಪಪ್ರದಾನಿ ದಿ| ದೇವಿಲಾಲ್, ಬಲರಾಮ್‍ಜಾಖಡರಂತಹ ರಾಜಕಾರಣಿಗಳು ನನ್ನತೋಟಕ್ಕೆ ಭೇಟಿಇತ್ತಿರುತ್ತಾರೆ.ಇಂದು ಹಳ್ಳಿಯಲ್ಲಿರುವ ವಿದ್ಯಾವಂತಯುವಕರುಕೃಷಿಯನ್ನುಯಾಂತ್ರೀಕೃತ ಗೊಳಿಸಿ ವೈಜ್ಞಾನಿಕವಾಗಿ ಕೃಷಿ/ತೋಟಗಾರಿಕೆ ಬೆಳೆಗಳನ್ನು ಬೆಳೆದಲ್ಲಿ ಯಾವುದೇ  ನೌಕರಿಯನ್ನುಅರಸದೇ ಸ್ವಾವಲಂಬಿ ಜೀವನ ನಡೆಸಬಹುದು. ಹಳ್ಳಿಯಿಂದ ಯುವಕರು ಪಟ್ಟಣದತ್ತ ಸಾಗುವುದರ ಬಗ್ಗೆ ವಿಷಾದ ವ್ಯಕ್ತ ಪಡಿಸುತಿದ್ದೇನೆ.
  -ಎನ್.ಸಿ. ಪಟೇಲ್ ಎಂ.ಎ. ಎಲ್.ಎಲ್.ಬಿ
  ರಾಜ್ಯ ಪ್ರಶಸ್ತಿ (ಕೃಷಿ).
   
ನಾನು ಎನ್.ರಾಮಯ್ಯ ಹೊನ್ನೇನಹಳ್ಳಿ ಗ್ರಾಮ ಕೃಷಿ ಕುಟುಂಬದಲ್ಲಿ ಹುಟ್ಟಿ ಈ ಸಂಘದಿಂದತೋಟಗಾರಿಕೆ ಬೆಳೆಗಳಿಗೆ ಸಾಲ ಪಡೆದು 10 ಎಕರೆದ್ರಾಕ್ಷಿ ಬೆಳೆ ಬೆಳೆದಿರುತ್ತೇನೆ. ಈ ಸಂಘದ ನೆರವು ಪಡೆದುಅಭಿವೃದ್ದಿ ಹೊಂದಿ ಸ್ವಂತ ಮನೆ ಕಟ್ಟಿ ನನ್ನಐದುಜನ ಮಕ್ಕಳು ತೋಟಗಾರಿಕೆ ಬೆಳೆ ಬೆಳೆದು ಮನೆಗಳನ್ನು ಕಟ್ಟಿಕೊಂಡು ಸ್ವಾವಲಂಬಿ ಜೀವನ ನಡೆಸುತಿದ್ದಾರೆ. ಈ ಎಲ್ಲಅಭಿವೃದ್ದಿಗೆ ಸಿಂಗನಾಯಕನಹಳ್ಳಿ ಸಹಕಾರ ಸಂಘವೇ ಮುಖ್ಯಕಾರಣಎಂದು ಹೇಳಲು ಬಯಸುತ್ತೇನೆ.
 -ಎನ್. ರಾಮಯ್ಯ (ಪ್ರಗತಿ ಪರರೈತರು).
   
ನಾನು ಕೇಶವ ಮೂರ್ತಿ ಸಿಂಗನಾಯಕನಹಳ್ಳಿ 5 ಎಕರೆಜಮೀನಿನಲ್ಲಿತೋಟಗಾರಿಕೆ ಬೆಳೆ ಬೆಳೆದಿರುತ್ತೇನೆ. ಸೀಬೆ ಹಣ್ಣು, ದ್ರಾಕ್ಷಿ ಮತ್ತು ಬಾಳೆ ವ್ಯವಸಾಯವನ್ನು ಮಾಡಿಕೊಂಡಿರುತ್ತೇನೆ. ಈ ಎಲ್ಲ ಅಭಿವ್ರದ್ದಿಗಳಿಗೆ ಸಿಂಗನಾಯಕನಹಳ್ಳಿ ಸಹಕಾರ ಸಂಘದಿಂದ ಪೂರ್ಣ ಬೆಂಬಲ ದೊರೆತಿದ್ದು ಈ ಸೌಲಭ್ಯವನ್ನುಇನ್ನಷ್ಟು ಹೆಚ್ಚಿನರೈತರು ಪಡೆಯಲಿ ಎಂದು ಹಾರೈಸುತ್ತೇನೆ.
  -ಕೇಶವ ಮೂರ್ತಿ ಪ್ರಗತಿ ಪರರೈತ
  ಸಿಂಗನಾಯಕನಹಳ್ಳಿ.
   
ನಾನು ನಾಗರಾಜ ಬಿನ್ ಮುನಿಶಾಮಪ್ಪ ನಾಗೇನಹಳ್ಳಿ ಈ ಸಂಘದಿಂದ ಹೈನುಗಾರಿಕೆ ಸಾÀಲ ಪಡೆದು ನಾಲ್ಕು ಹೈಬ್ರಿಡ್ ಹಸುಗಳನ್ನು ಸಾÀಕುತಿದ್ದೇನೆ. ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪಕಸುಬು ಆಗಿ ಲಾಭದಾÀಯಕವಾಗಿ ನಿರ್ವಹಿಸುತಿದ್ದೇನೆ. ಮಾಸಿಕ ರೂ.15000 ಗಳಿಸುತಿದ್ದೇನೆ ಇದರಿಂದ ನನ್ನಜೀವನ ಮಟ್ಟ ಸುಧಾರಿಸಿಕೊಂಡಿದೆ.
  -ನಾಗರಾಜ ಬಿನ್ ಮುನಿಶಾಮಪ್ಪ
  ನಾಗೇನಹಳ್ಳಿ.
   
ನಾನು ಈ ಸಂಘದಿಂದ ರೂ.50000-00 ಸಾಲ ಪಡೆದುತರಬೇತಿ ಹೊಂದಿ ಬ್ಯೂಟಿ ಪಾರ್ಲರ್ ನಡೆಸುತಿದ್ದೇನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯಿಂದರೂ. 7500-00 ಸಹಾಯಧÀನ ಒದಗಿಸಿಕೊಟ್ಟಿರುತ್ತಾರೆ. ನನ್ನ ವೃತ್ತಿಯಿಂದ ಮಾಸಿಕ ರೂ. 25000-00 ವರಮಾನಇರುತ್ತದೆ. ಸಂಘವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಸಂಘವು ಅನೇಕ ತರಬೇತಿ ಶಿಬಿರಗಳನ್ನು ನಡೆಸುತಿದ್ದುಇದರಿಂದ ಮಹಿಳೆಯರಿಗೆ ಹೆಚ್ಚು ಉಪಯೋಗವಾಗುತ್ತಿದೆ. ನಾನು ಸ್ವಸಹಾಯ ಗುಂಪಿನ ಸದಸ್ಯಳಾಗಿರುತ್ತೇನೆ. ನಾನು ಕೂಡ ಸ್ವಾವಲಂಬಿ ಜೀವನ ನಡೆಸಲು ಈ ಸಹಕಾರ ಸಂಘ ನನಗೆ ಸಹಾಯ ಮಾಡಿದೆ.
  -ಶ್ರೀಮತಿ ಅನ್ನಪೂರ್ಣಮ್ಮ
  ಪುಟ್ಟೇನಹಳ್ಳಿ.
   
ನಾನು ಈ ಸಂಘದ ಸದಸ್ಯನಾಗಿದ್ದುಡ್ರೈವರ್ ಕೆಲಸ ಮಾಡುತ್ತಿದ್ದೆ ನಾನು ಹೃದಯದತೊಂದರೆಗೆ ಒಳಗಾಗಿ ಯಶÀಸ್ವಿನಿ ಯೋಜನೆಯಡಿಯಲ್ಲಿಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುತ್ತೇನೆ. ಅದರಲ್ಲು ಯಶಸ್ವಿನಿ ಯೋಜನೆಯಕಂತನ್ನು ಸಂಘವೇ ಭರಿಸಿರುವುದು ವಿಶೇಷವಾಗಿದೆ. ಇದರಿಂದ ಸುಮಾರುರೂ. 1.5 ಲಕ್ಷ ಹಣ ಉಳಿತಾಯವಾಗಿದೆ. ನನಗೆ ಶಸ್ತ್ರಚಿಕಿತ್ಸೆ ನಂತರಅಂಗಡಿ ವ್ಯಾಪಾರ ಮಾಡಲುರೂ. 50,000-00 ಸಾಲದ ಸೌಲಭ್ಯ ಸಂWವುÀ ಒದಗಿಸಿದ್ದು ನನ್ನಜೀವನಕ್ಕೆದಾರಿ ಮಾಡಿಕೊಟ್ಟಿದೆÉ. ನಾನು ಸಂತ್ರಪ್ತಿಜೀವನ ನಡೆಸುತಿದ್ದು ನನ್ನ ಮಗನು ವಿದ್ಯಾವಂತನಾಗಿ ಖಾಸಗಿ ಸಂಸ್ಥೆಯಲ್ಲಿಉದ್ಯೋಗಿಯಾಗಿರುತ್ತಾನೆ. ಸಂಘದ ನೆರವಿನಿಂದ ನನ್ನಜೀವನದಲ್ಲಿದೊಡ್ಡ ಬದಲಾವಣೆಆಗಿರುತ್ತದೆ.
  -ರಾಮರೆಡ್ಡಿ
  ಸಿಂಗನಾಯಕನಹಳ್ಳಿ.
   
ನಾನು ಈ ಸಂಘದ ಸದಸ್ಯನಾಗಿದ್ದು ಪರಿಸಿಷ್ಟ ಜಾತಿಗೆ ಸೇರಿದವನಾಗಿರುತ್ತೇನೆ. ನನಗೆ ಈ ಸಂಘದಿಂದತರಕಾರಿ ವ್ಯಾಪಾರ ಮಾಡಲುರೂ. 25000 ಸಾಲದ ನೆರವು ನೀಡಿದ್ದುತೋಟಗಾರಿಕೆಇಲಾಕೆಯಿಂದರೂ. 15000 ಸಹಾಯಧನದಲ್ಲಿ ನೂಕು ಬಂಡಿ ಒದಗಿಸಿಕೊಟ್ಟಿರುತ್ತಾರೆ. ಇದರಿಂದ ಬಡವನಾದ ನನಗೆ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಿದ್ದು ನಾನು ಸ್ವಾವಲಂಬಿಯಾಗಿರುತ್ತೇನೆ.
  -ಬೈಲಪ್ಪ
  ರಾಜನುಕುಂಟೆ.
   
ನಾನು ಈ ಸಂಘದ ಸದಸ್ಯನಾಗಿದ್ದು ಸೈಕಲ್ ಷಾಪ್ ನಡೆಸಲು ಸಂಘವು ರೂ. 50000 ಸಾಲದ ನೆರವನ್ನು ನೀಡಿದ್ದು 10 ಸೈಕಲುಗಳನ್ನು ಬಾಡಿಗೆÀಗೆ ನಡೆಸುತಿದ್ದೇನೆ. ಅಲ್ಲದೆಇದರೊಂದಿಗೆಟಯರ್ ಪಂಕ್ಚರ್ ಕೆಲಸ ನಡೆಸುತಿದ್ದೇನೆ. ಮಾಸಿಕ ರೂ. 15000 ವರಮಾನವಿರುತ್ತದೆ. ನನಗೆ ಜೀವನ ನಡೆಸಲು ಸಂಘ ಸಹಕಾರಿಯಾಗಿದೆ.
  -ವೆಂಕಟೇಶ
  ರಾಜನುಕುಂಟೆ.
   
ಸಂಘವು ಕೇವಲ ಕೃಷಿಗೆ ಮಾತ್ರ ಸಾಲ ನೀಡುವುದಲ್ಲದೆ ನಾನು ಈ ಸಂಘದ ಸದಸ್ಯಳಾಗಿ ಬೇಕರಿ ಉತ್ಪನ್ನಗಳನ್ನು ತಯಾರಿಸಿ ಸ್ವಉದ್ಯೋಗ ನಡೆಸುತಿದ್ದೇನೆ. ನನಗೆ ಬೇಕರಿ ವ್ಯಾಪಾರಕ್ಕೆ ಸಂಘ ರೂ.2,00,000 (ಲಕ್ಷ) ಸಾಲ ನೀಡಿದ್ದು ಮಹಿಳೆಯರು ಸ್ವಉದ್ಯೋಗ ನಡೆಸಲು ಸಹಕಾರಿಗಳಾಗಿರುತ್ತಾರೆ.
  -ಶ್ರೀಮತಿ ಭಾಗ್ಯ
  ರಾಜಾನುಕುಂಟೆ.
   
ನಾನು ಈ ಸಂಘದ ಸದಸ್ಯನಾಗಿದ್ದು ಪರಿಶಿಷ್ಟ ಜಾತಿಗೆ ಸೇರಿದವನಾಗಿರುತ್ತೇನೆ. ಸಂಘ ನನಗೆ ಹಿಟ್ಟಿನಗಿರಣಿ ಸ್ಥಾಪಿಸಲು ರೂ. 50,000 ಸಾಲ ನೀಡಿದ್ದು ಕೃಷಿ ಇಲಾಖೆಯಿಂದರೂ. 50000 ಸಹಾಯಧನ ಒದಗಿಸಿಕೊಟ್ಟಿರುತ್ತಾರೆ. ಇದರಿಂದ ನನ್ನಆರ್ಥಿಕ ಮಟ್ಟ ಸುಧಾರಿಸಿಕೊಂಡಿದೆ
  -ಕೃಷ್ಣಪ್ಪ
  ಸುರಧೇನುಪುರ.
 
 
 
 
Copyright©2013 Privacy Policy Disclaimer Sitemap