|
ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರಾಗಿ 3 ಬಾರಿ ಆಯ್ಕೆಯಾಗಿರುತ್ತಾರೆ. |
|
|
2005-06 ನೇ ಸಾಲಿನಿಂದ ಸಂಘದ ಪ್ರಥಮ ಮಹಿಳಾ ಅಧ್ಯಕ್ಷಿಣಿಯಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. |
|
|
2010-15 ನೇ ಸಾಲಿಗೆ ಪುನರ್ ಆಯ್ಕೆಯಾಗಿ ಅಧ್ಯಕ್ಷಿಣಿಯಾಗಿ ಮುಂದುವರೆಯುತ್ತಿದ್ದಾರೆ. |
|
|
ಇವರ ಸೇವಾ ಅವಧಿಯಲ್ಲಿ ಸಂಘವು ಸರ್ವತೋಮುಖ ಅಭಿವೃದ್ಧಿಯನ್ನು ಕಂಡು ಸಂಘವು ಉತ್ತಮ ಸಹಕಾರ ಸಂಘ ಎಂದು ರೂಪುಗೊಂಡಿದೆ. |
|
|
ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ನಂತರ 500 ಕ್ಕೂ ಹೆಚ್ಚು ಸ್ತ್ರೀ ಶಕ್ತಿಗುಂಪುಗಳನ್ನು ಸ್ಥಾಪಿಸಿ ಪ್ರತಿ ಗುಂಪುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ತರಬೇತಿ ಹಾಗೂ ಸಾಲದ ನೆರವು ಗುಂಪಿಗೆ ರೂ. 5,00,000-00 ವರೆವಿಗೂ ಕೊಡಿಸಿರುತ್ತಾರೆ. |
|
|
ಸಹಕಾರ ಸಂಘದ 800 ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಸರ್ಕಾರದ ವಿವಿಧ ಸಂಸ್ಥೆಗಳ ಸಹಾಯಧನದೊಂದಿಗೆ ಆರ್ಥಿಕ ನೆರವನ್ನು ವಿಸ್ತರಿಸಿರುತ್ತಾರೆ. ಇವರ ಸೇವಾ ಅವಧಿಯಲ್ಲಿ ಸಂಘದ ಹೈಟೆಕ್ ಕಟ್ಟಡ ನಿರ್ಮಾಣಗೊಂಡಿದ್ದು ಇದೊಂದು ಸಾಧನೆಯ ಮೈಲುಗಲ್ಲು ಆಗಿರುತ್ತದೆ. |
|
|
ಸಂಘದ ಎಲ್ಲಾ ಶಾಖೆಗಳನ್ನು ಕಂಪ್ಯೂಟರೀಕರಣಗೊಳಿಸಿರುತ್ತಾರೆ. |
|
|
ಇವರ ಅವಧಿಯಲ್ಲಿ ಸಂಘದ ಸದಸ್ಯರಿಗೆ ಯಶಸ್ವಿನಿ ಯೋಜನೆಯ ಕಂತನ್ನು ಸಂಘದಿಂದಲೇ ಭರಿಸಿಕೊಟ್ಟಿರುತ್ತಾರೆ. |
|
|
ಸಂಘದ ವತಿಯಿಂದ ಅನೇಕ ತರಬೇತಿ ಕಾರ್ಯಕ್ರಮಗಳು, ಆರೋಗ್ಯ ತಪಾಸಣೆ ಪಶುಚಿಕಿತ್ಸಾ ಶಿಬಿರಗಳನ್ನು ನಡೆಸಿಕೊಟ್ಟಿರುತ್ತಾರೆ. |
|
|
ಬೆಂಗಳೂರು ಉತ್ತರ ತಾಲ್ಲೂಕಿನ ಸುಮಾರು 600 ಕ್ಕೂ ಹೆಚ್ಚು ಮಹಿಳೆಯರಿಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಧನದೊಂದಿಗೆ ಆರ್ಥಿಕ ನೆರವನ್ನು 2 ಕೋಟಿಗೂ ಹೆಚ್ಚು ಒದಗಿಸಿಕೊಟ್ಟಿರುತ್ತಾರೆ. |
|
|
15 ಜನ ಪರಿಶಿಷ್ಟ ಜಾತಿ ಸದಸ್ಯರಿಗೆ ತೋಟಗಾರಿಕೆ ಇಲಾಖೆಯ ಸಹಾಯಧನದೊಂದಿಗೆ ಹಣ್ಣು ತರಕಾರಿ ಮಾರಾಟ ಮಾಡಲು ನೂಕುಬಂಡಿ ಒದಗಿಸಿ ಕೊಟ್ಟಿರುತ್ತಾರೆ. |
|
|
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುತ್ತಾರೆ. ಇವರ ಅವಧಿಯಲ್ಲಿ ಸರ್ಕಾರದ ಎಲ್ಲಾ ಕಾರ್ಯಯೋಜನೆಗಳನ್ನು ಜನ ಸಮೂಹಕ್ಕೆ ಪರಿಚಯಿಸಿ ದೀನ-ದಲಿತರು, ಹಿಂದುಳಿದ ವರ್ಗಗಳಿಗೆ ವಿಶೇಷ ಸಹಾಯಧನದ ನೆರವನ್ನು ಒದಗಿಸಿಕೊಟ್ಟಿರುತ್ತಾರೆ. |
|
|
ಸಿಂಗನಾಯಕನಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರಿಗೆ ಸ್ವಾವಲಂಭಿ ಜೀವನ ನಡೆಸಲು ಹೊಲಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸಿ, ತರಬೇತಿ ನೀಡಿ ಹೊಲಿಗೆ ಯಂತ್ರಗಳನ್ನು ಒದಗಿಸಿಕೊಟ್ಟಿರುತ್ತಾರೆ. |
|
|
ಸಂಘದ ಸದಸ್ಯರ ಮಕ್ಕಳಿಗೆ ಹಾಗೂ ಮಹಿಳಾ ಸದಸ್ಯರಿಗೆ ಸಂಘದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಒದಗಿಸಿಕೊಟ್ಟಿರುತ್ತಾರೆ. |
|
|
14.11.2011ರ ಸಹಕಾರ ಸಪ್ತಾಹ ದಿನದಂದು ಇವರಿಗೆ ರಾಜ್ಯದ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರವರು "ಸಹಕಾರ ರತ್ನ" ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. 2011ರ ಸಾಲಿನ ಸಹಕಾರ ರತ್ನ - ಕರ್ನಾಟಕ ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿರುತ್ತದೆ. |